ಪವನ್ ಕುಮಾರ್ ಸೆಹ್ರಾವತ್ ಒಬ್ಬ ಭಾರತೀಯ ಕಬಡ್ಡಿ ಆಟಗಾರ. ಅವರು ಪ್ರಸ್ತುತ ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟಾನ್ಸ್‌ಗಾಗಿ ಆಡುತ್ತಾರೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪ್ರತಿನಿಧಿಸುವ ಭಾರತೀಯ ಕಬಡ್ಡಿ ಆಟಗಾರ. ಒಂಬತ್ತನೇ ಸೀಸನ್‌‍ನಲ್ಲಿ ತಮಿಳ್ ತಲೈವಾಸ್ ಅವರನ್ನು ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪವನ್‍ರವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಹತ್ತನೇ ಸೀಸನ್‌‍ನಲ್ಲಿ, ತೆಲುಗು ಟೈಟಾನ್ಸ್ ಅವರನ್ನು ೨.೬೦ ಕೋಟಿಗೆ ಖರೀದಿಸಿತು ಮತ್ತು ಇದರೊಂದಿಗೆ, ಅವರು ಮತ್ತೊಮ್ಮೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು. == ಆರಂಭಿಕ ಜೀವನ == ಪವನ್ ಸೆಹ್ರಾವತ್‍ರವರು ೯ ಜುಲೈ ೧೯೯೬ ರಂದು ದೆಹಲಿಯಲ್ಲಿ ಜನಿಸಿದರು. ಅವರಿಗೆ ೨೭ ವರ್ಷ. ಅವರ ತಂದೆಯ ಹೆಸರು ರಾಜಬೀರ್ ಸಿಂಗ್ ಸೆಹ್ರಾವತ್. ಅವರು ಬವಾನಾದ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು. == ವೃತ್ತಿ == === ಪ್ರೊ ಕಬಡ್ಡಿ ಲೀಗ್ === ಆರಂಭಿಕ ಸೀಸನ್‍ಗಳು ಪವನ್ ಪ್ರೊ ಕಬಡ್ಡಿ ಲೀಗ್ ನ ಮೂರನೇ ಸೀಸನ್‍ನಲ್ಲಿ ಬೆಂಗಳೂರು ಬುಲ್ಸ್‌ಗೆ ಪಾದಾರ್ಪಣೆ ಮಾಡಿದರು. ಅವರು ೧೩ ಪಂದ್ಯಗಳಲ್ಲಿ ಆಡಿದರು ಮತ್ತು ೪೫ ಅಂಕಗಳೊಂದಿಗೆ ತನ್ನ ತಂಡದ ಪ್ರಮುಖ ರೈಡ-ಪಾಯಿಂಟ್ ಸ್ಕೋರರ್ ಆಗಿ ಪಂದ್ಯವನ್ನು ಮುಗಿಸಿದರು. ಪವನ್ ಸೀಸನ್ ೪ ರಲ್ಲಿ ಹತ್ತು ಪಂದ್ಯಗಳನ್ನು ಆಡಿದರು ಮತ್ತು ೩೩ ದಾಳಿಗಳಿಂದ ಕೇವಲ ೧೧ ಅಂಕಗಳನ್ನು ಗಳಿಸಿದರು. ಸೀಸನ್ ೫ ರಲ್ಲಿ ಪವನ್‍ರವರನ್ನು ಗುಜರಾತ್ ಜೈಂಟ್ಸ್ ಆಯ್ಕೆ ಮಾಡಿಕೊಂಡರು ಮತ್ತು ಮುಖ್ಯವಾಗಿ ಇರವರನ್ನು ಬೆಂಚ್ ಆಫ್ ಇಂಪ್ಯಾಕ್ಟ್ ರೈಡರ್ ಆಗಿ ಬಳಸಿಕೊಂಡರು. ಅವರು ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳನ್ನು ಆಡಿದರು ಮತ್ತು ಹತ್ತು ಅಂಕಗಳನ್ನು ಗಳಿಸಿದರು. ಬ್ರೇಕ್ ಥ್ರೂ ಮತ್ತು ಪ್ರಮುಖ ಆಟಗಾರ ಪವನ್ ಸೀಸನ್ ೬ ರಲ್ಲಿ ಪುನಃ ಬೆಂಗಳೂರು ಬುಲ್ಸ್‌ಗೆ ಮರಳಿದರು. ಅವರು ತಮಿಳ್ ತಲೈವಾಸ್ ವಿರುದ್ಧದ ಮೊದಲ ಪಂದ್ಯದಲ್ಲಿ ೨೦ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು. ಅವರು ತಮ್ಮ ಮೊದಲ ಐದು ಪ್ರದರ್ಶನಗಳಲ್ಲಿ ನಾಲ್ಕು ಸೂಪರ್ ೧೦ ಗಳನ್ನು ಗಳಿಸಿದರು. ಅವರು ಅಂತಿಮವಾಗಿ ೧೩ ಸೂಪರ್ ೧೦ ಗಳ ೨೭೨ ಅಂಕಗಳೊಂದಿಗೆ ಪಂದ್ಯವನ್ನು ಮುಗಿಸಿದರು. ಪವನ್ ಕ್ವಾಲಿಫೈಯರ್ ೧ ಪಂದ್ಯದಲ್ಲಿ ೧೩ ರೈಡ್ ಪಾಯಿಂಟ್‌ಗಳನ್ನು ಮತ್ತು ಗುಜರಾತ್ ಜೈಂಟ್ಸ್ ವಿರುದ್ಧದ ಫೈನಲ್‌ನಲ್ಲಿ ೨೨ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು ಮತ್ತು ಇದರಿಂದ ಬೆಂಗಳೂರು ಬುಲ್ಸ್ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು. ಪವನ್‍ರವರು ಲೀಗ್‌ನ ಅತ್ಯಂತ ಮೌಲ್ಯಯುತ ಆಟಗಾರ ಎಂಬ ಕಿರೀಟವನ್ನು ಪಡೆದರು. ಸೆಹ್ರಾವತ್ ಅವರು ಬುಲ್ಸ್ ಅನ್ನು ಸೀಸನ್ ೭ ರಲ್ಲಿ ತಮ್ಮ ಎರಡನೇ ಪ್ಲೇಆಫ್ ಪ್ರದರ್ಶನಕ್ಕೆ ಮುನ್ನಡೆಸಿದರು ಮತ್ತು ೩೫೩ ಅಂಕಗಳೊಂದಿಗೆ ಲೀಗ್‌ನ ಅಗ್ರ ಸ್ಕೋರರ್ ಆಗಿ ಸೀಸನ್‍ನನ್ನು ಮುಗಿಸಿದರು. ಅವರು ಹರಿಯಾಣ ಸ್ಟೀಲರ್ಸ್ ವಿರುದ್ಧ ೩೯ ರೇಡ್ ಅಂಕಗಳನ್ನು ಗಳಿಸಿ ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್‌ಗಳನ್ನು ಗಳಿಸಿದರು. ಸೀಸನ್ ೮ ರಲ್ಲಿ ೩೨೦ ಅಂಕಗಳನ್ನು ಗಳಿಸಿದ ಪವನ್ ಅತ್ಯಂತ ಯಶಸ್ವಿ ರೈಡರ್ ಆದರು. ಗಾಯ ಮತ್ತು ಪುನರಾಗಮನ ಒಂಬತ್ತನೇ ಸೀಸನ್‌ನಲ್ಲಿ ಪವನ್‍ರವರನ್ನು ತಮಿಳ್ ತಲೈವಾಸ್ ₹ ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪ್ರೊ ಕಬ್ಬಡಿ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಅವರು ಗುಜರಾತ್ ಜೈಂಟ್ಸ್ ವಿರುದ್ಧದ ಸೀಸನ್‌ನ ಮೊದಲ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದರು,ಇದು ಅವರ ಸೀಸನ್‌ನ್ನು ಕೊನೆಗೊಳಿಸಿತು. ಹತ್ತನೇ ಸೀಸನ್‌ಗೆ ಮೊದಲು, ಪವನ್‍ರವರನ್ನು ತಮಿಳು ತಲೈವಾಸ್ ಬಿಡುಗಡೆ ಮಾಡಿತು ಮತ್ತು ಅವರು ಹರಾಜು ಪೂಲ್‌ಗೆ ಹೋದರು. ಹರಾಜಿನಲ್ಲಿ ಪವನ್ ಅವರನ್ನು ತೆಲುಗು ಟೈಟಾನ್ಸ್ ₹ ೨.೬೦ ಕೋಟಿಗಳ ದಾಖಲೆಯ ಒಪ್ಪಂದಕ್ಕೆ ಖರೀದಿಸಿತು. ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ ಸೀಸನ್ ೧೦ ರಲ್ಲಿ ಇದುವರೆಗೆ ೫ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು ೫೩ ಅಂಕಗಳನ್ನು ಗಳಿಸಿದ್ದಾರೆ ಮತ್ತು ಲೀಗ್‌ನ ಮೂರನೇ ಅತ್ಯಂತ ಯಶಸ್ವಿ ರೈಡರ್ ಆಗಿದ್ದಾರೆ. === ಅಂತರರಾಷ್ಟ್ರೀಯ ವೃತ್ತಿ === ಪವನ್ ೨೦೧೯ ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಭಾರತದ ರಾಷ್ಟ್ರೀಯ ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರು ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ೨೦೨೩ ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. == ಸಾಧನೆಗಳು == ಅತ್ಯಂತ ಮೌಲ್ಯಯುತ ಆಟಗಾರ, ೨೦೧೮ ಪ್ರೊ ಕಬ್ಬಡಿ ಲೀಗ್ ಹೆಚ್ಚಿನ ರೈಡ್ ಅಂಕಗಳು, ೨೦೧೮, ೨೦೨೯ ಮತ್ತು ೨೦೨೧-೨೨ ಪ್ರೊ ಕಬಡ್ಡಿ ಲೀಗ್ ಪ್ರೊ ಕಬಡ್ಡಿ ಪಂದ್ಯದಲ್ಲಿ ಹೆಚ್ಚಿನ ರೈಡ್ ಅಂಕಗಳು (೩೯) ಚಿನ್ನ, ೨೦೧೯ ದಕ್ಷಿಣ ಏಷ್ಯಾ ಕ್ರೀಡಾಕೂಟ ಚಿನ್ನ, ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ == ಪ್ರಶಸ್ತಿಗಳು == ಅವರಿಗೆ ೨೦೨೩ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. == ಬಾಹ್ಯ ಕೊಂಡಿಗಳು == ಪ್ರೊ ಕಬಡ್ಡಿ | ಪ್ರೊ ಕಬಡ್ಡಿ ಲೀಗ್ ತಂಡಗಳು ಮತ್ತು ಆಟಗಾರರ ದಾಖಲೆಗಳು ://..//-------------- ಪವನ್ ಕುಮಾರ್ ಸೆಹ್ರಾವತ್ ಸೀಸನ್ 6 ರ ಅತ್ಯಂತ ಮೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದ್ದಾರೆ ಬೆಂಗಳೂರು ಬುಲ್ಸ್ ಗುಜರಾತ್ ಜೈಂಟ್ಸ್ ಲೈವ್ ಪ್ರೊ ಕಬಡ್ಡಿ ಸ್ಕೋರ್ - ಪ್ರೊ ಕಬಡ್ಡಿ ಲೀಗ್ ://..//---1000070 == ಉಲ್ಲೇಖಗಳು ==